ನಮಸ್ಕಾರ ಸ್ನೇಹಿತರೇ, ಸರ್ಕಾರದಿಂದ ಒಂದು ಗುಡ್ ನ್ಯೂಸ್ ಬಂದಿದೆ. ಇನ್ಮುಂದೆ ಅನ್ನಭಾಗ್ಯ ಯೋಜನೆ ಅಕ್ಕಿ ಜೊತೆಗೆ ಉಚಿತ ಇಂದಿರಾ ಕಿಟ್ ಅನ್ನು ಕೂಡ ಸರ್ಕಾರ ನೀಡಲು ಮುಂದಾಗಿದೆ. ಇನ್ನು ಈ ಇಂದಿರಾ ಕಿಟ್ ನಲ್ಲಿ ಎನೆಲ್ಲಾ ಇರುತ್ತದೆ. ಯಾರಿಗೆಲ್ಲ ಇಂದಿರಾ ಕಿಟ್ ಸಿಗುತ್ತದೆ ಎಂದು ಸಂಪೂರ್ಣ ಮಾಹಿತಿ ಇದೀಗ ತಿಳಿಯೋಣ.
ಅನ್ನಭಾಗ್ಯ ಯೋಜನೆ ಜೊತೆಗೆ ಇಂದಿರಾ ಕಿಟ್, Government New Scheme, Indira Kit For Free, Indira Kit along with Annabhagya Yojana, Annabagya Scheme Update
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಾವು 5 ಗ್ಯಾರಂಟಿ ಯೋಜನೆಗಳನ್ನು ನೀಡಲಿದ್ದೇವೆ ಎಂದು ಹೇಳಿದ್ದರು. ಇನ್ನು ಅಧಿಕಾರಕ್ಕೆ ಬಂದ ನಂತರ ಈ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ಮಾಡಿತು. ಆದರೆ ಈ ಯೋಜನೆ ಸರಿಯಾಗಿ ನೀಡಲು ಸರ್ಕಾರಕ್ಕೆ ಆಗಲಿಲ್ಲ. ಇನ್ನು ಈ 5 ಗ್ಯಾರಂಟಿ ಯೋಜನೆಗಳಲ್ಲಿ ಅನ್ನಭಾಗ್ಯ ಯೋಜನೆ ಕೂಡ ಒಂದು. ಈ ಯೋಜನೆ ಮೂಲಕ ಒಂದು ರೇಷನ್ ಕಾರ್ಡ್ ನಲ್ಲಿ ಇರುವ ಪ್ರತಿ ಸದಸ್ಯರಿಗೆ 10 ಕೆಜಿ ಅಕ್ಕಿಯನ್ನು ನೀಡುತ್ತೇವೆ ಅಂತ ಹೇಳಿದ್ದರು. ಆದರೆ ಅಕ್ಕಿ ಪೂರೈಕೆ ಸರಿಯಾಗಿ ಆಗದ ಕಾರಣ 5ಕೆಜಿ ಅಕ್ಕಿ ಜೊತೆಗೆ ಪ್ರತಿ ಸದಸ್ಯರಿಗೆ 170 ರೂಪಾಯಿ ಪ್ರತಿ ತಿಂಗಳು ನೀಡುತ್ತೇವೆ ಅಂತ ಹೇಳಿದ್ದರು.
ಆ ಬಳಿಕ ಅನ್ನಭಾಗ್ಯ ಯೋಜನೆಯಂತೆ 10ಕೆಜಿ ಅಕ್ಕಿ ನೀಡಲು ಮುಂದಾಗಿತ್ತು. ಆದರೆ ಇದೀಗ ಅನ್ನಭಾಗ್ಯ ಯೋಜನೆಯಲ್ಲಿ ಅಕ್ಕಿ ಜೊತೆಗೆ ಇಂದಿರಾ ಕಿಟ್ ನೀಡಲು ಸರ್ಕಾರದ ಮುಂದಾಗಿದೆ. ಇನ್ನು ಯಾರಿಗೆಲ್ಲ ಸಿಗುತ್ತದೆ ಎನ್ನುವುದು ಇದೀಗ ನೋಡೋಣ.

ಇಂದಿರಾ ಆಹಾರ ಕಿಟ್:
ಅನ್ನಭಾಗ್ಯ ಯೋಜನೆಯಡಿ 10ಕೆಜಿ ಅಕ್ಕಿಯನ್ನು ನೀಡಲಾಗುತ್ತಿತ್ತು. ಆದರೆ ಅಕ್ಕಿ ಪೂರೈಕೆ ಸಾಧ್ಯವಾಗದ kayana 5ಕೆಜಿ ಅಕ್ಕಿ ಜೊತೆಗೆ ಹಣ ನೀಡಲಾಗುತ್ತಿತ್ತು. ಆದರೆ ಹಣದ ಜೊತೆಗೆ ಪೌಷ್ಟಿಕಾಂಶಯುಕ್ತ ಆಹಾರ ಪದಾರ್ಥಗಳನ್ನು ನೀಡಬೇಕು ಎಂಬ ಉದ್ದೇಶದಿಂದ ಸರ್ಕಾರ ಈ ಕಿಟ್ ಅನ್ನು ವಿನ್ಯಾಸಗೊಳಿಸಿದೆ. ಇದರಲ್ಲಿ ದಿನನಿತ್ಯದ ಅಡುಗೆಗೆ ಬೇಕಾದ ಪ್ರಮುಖ ಪದಾರ್ಥಗಳು ಇರುತ್ತದೆ.
ಕಿಟ್‌ನಲ್ಲಿ ಏನೇನಿರಲಿವೆ?
ಈ ಆಹಾರ ಕಿಟ್‌ನಲ್ಲಿ ಈ ಕೆಳಗಿನ ವಸ್ತುಗಳನ್ನು ನೀಡಲಾಗುತ್ತದೆ. ಇಲ್ಲಿ ಮನೆಯ ಪ್ರತಿ ಸದಸ್ಯರಿಗೆ 5ಕೆಜಿ ಅಕ್ಕಿಯ ಜೊತೆಗೆ ಒಂದು ಆಹಾರ ಕಿಟ್ ನೀಡಲಾಗುತ್ತದೆ. ಇನ್ನು ಈ ಕಿಟ್ ನಲ್ಲಿ ಎನೆಲ್ಲಾ ವಸ್ತುಗಳು ಇರುತ್ತದೆ ಎನ್ನುವುದನ್ನ ಇದೀಗ ನೋಡೋಣ.
- ಅಡುಗೆ ಎಣ್ಣೆ: ಪ್ಯಾಕೆಟ್ ರೂಪದಲ್ಲಿ ಎಣ್ಣೆ ವಿತರಣೆ.
- ತೊಗರಿ ಬೇಳೆ: ಪ್ರೋಟೀನ್ ಯುಕ್ತ ಆಹಾರಕ್ಕಾಗಿ.
- ಸಕ್ಕರೆ ಮತ್ತು ಉಪ್ಪು: ಅವಶ್ಯಕತೆಗೆ ಅನುಗುಣವಾಗಿ.
- ಇತರ ಪದಾರ್ಥಗಳು: ಮೂಲಗಳ ಪ್ರಕಾರ, ಇದರಲ್ಲಿ ರವೆ ಅಥವಾ ಇತರ ಧಾನ್ಯಗಳನ್ನು ಸೇರಿಸುವ ಸಾಧ್ಯತೆಯೂ ಇದೆ.
ಇದಿಷ್ಟು ಈ ಒಂದು ಆಹಾರ ಕಿಟ್ ನಲ್ಲಿ ಇರುತ್ತದೆ.
ವಿತರಣೆ ಯಾವಾಗ?
ಸರ್ಕಾರವು ಈ ಕಿಟ್ ವಿತರಣೆಗೆ ಅಗತ್ಯವಿರುವ ಟೆಂಡರ್ ಪ್ರಕ್ರಿಯೆ ಮತ್ತು ತಯಾರಿಯನ್ನು ಪೂರ್ಣಗೊಳಿಸುತ್ತಿದೆ. ಮುಂಬರುವ ದಿನಗಳಲ್ಲಿ ಅಥವಾ ಹಬ್ಬದ ಸೀಸನ್‌ನಲ್ಲಿ ಈ ಯೋಜನೆಯನ್ನು ಅಧಿಕೃತವಾಗಿ ಜಾರಿಗೆ ತರಲು ನಿರ್ಧರಿಸಲಾಗಿದೆ. ಅರ್ಹ ಪಡಿತರ ಚೀಟಿ ಅಂದರೆ ಅಂತ್ಯೋದ್ಯಮ ಹಾಗೂ ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ಇದು ಸಿಗುತ್ತದೆ.
ಇದನ್ನ ಓದಿ: ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ, Free Sewing machine Scheme, Government Scheme 2026
ಅನ್ನಭಾಗ್ಯ ಹಣದ ಸ್ಟೇಟಸ್ ಅಪ್ಡೇಟ್:
ಹಲವು ಫಲಾನುಭವಿಗಳಿಗೆ ಕಳೆದ ಕೆಲವು ತಿಂಗಳುಗಳಿಂದ ಅನ್ನಭಾಗ್ಯ ಯೋಜನೆಯ ಹಣ ಜಮೆಯಾಗಿರಲಿಲ್ಲ. ಇದಕ್ಕೆ ತಾಂತ್ರಿಕ ಕಾರಣಗಳು ಮತ್ತು ಇ-ಕೆವೈಸಿ (e-KYC) ಅಪ್ಡೇಟ್ ಆಗದಿರುವುದು ಮುಖ್ಯ ಕಾರಣವಾಗಿತ್ತು. ಇದೀಗ ಸರ್ಕಾರವು ಬಾಕಿ ಇರುವ ಹಣವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಜಮೆ (DBT) ಮಾಡುವ ಪ್ರಕ್ರಿಯೆಯನ್ನು ಚುರುಕುಗೊಳಿಸಿದೆ. ಇನ್ನೇನು ಬಾಕಿ ಉಳಿದಿರುವ ಎಲ್ಲಾ ಕಂತುಗಳು ನಿಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಆಗುತ್ತೆ.
ಫಲಾನುಭವಿಗಳು ಮಾಡಬೇಕಾದ ಕೆಲಸಗಳು:
ಈ ಯೋಜನೆಯ ಲಾಭ ಪಡೆಯಲು ಮತ್ತು ಆಹಾರ ಕಿಟ್ ಪಡೆಯಲು ಕೆಲವು ಕ್ರಮಗಳು ಇರುತ್ತದೆ. ಅವುಗಳು ಯಾವುದು ಎನ್ನುವುದನ್ನ ಇದೀಗ ನೋಡೋಣ.
- ಇ-ಕೆವೈಸಿ (E-KYC): ಪಡಿತರ ಚೀಟಿಯಲ್ಲಿರುವ ಎಲ್ಲಾ ಸದಸ್ಯರ KYC ಆಗಿದ್ಯಾ ಇಲ್ಲ ಎಂಬುದನ್ನ ಒಮ್ಮೆ ಚೆಕ್ ಮಾಡಿ. E-KYC ಆಗದೆ ಇದ್ದರೆ ಅದನ್ನು ಪೂರ್ಣಗೊಳಿಸಿ.
- ಬ್ಯಾಂಕ್ ಖಾತೆ ಲಿಂಕ್: ಆಧಾರ್ ಕಾರ್ಡ್ ಬ್ಯಾಂಕ್ ಖಾತೆಗೆ ಕಡ್ಡಾಯವಾಗಿ ಲಿಂಕ್ ಆಗಿರಬೇಕು (NPCI Mapping). ಕೆಲವೊಮ್ಮೆ ಲಿಂಕ್ ಆಗಿರುವುದಿಲ್ಲ. ನಿಮ್ಮ ಬ್ಯಾಂಕ್ ಗೆ ಹೋಗಿ ಒಮ್ಮೆ ಚೆಕ್ ಮಾಡಿ.
- ಸಕ್ರಿಯ ಪಡಿತರ ಚೀಟಿ: ನಿಮ್ಮ ರೇಷನ್ ಕಾರ್ಡ್ ಚಾಲ್ತಿಯಲ್ಲಿರುವುದಿಲ್ಲ. ಆದರೆ De-Activate ಆಗಿರುವ ಸಾದ್ಯತೆ ಹೆಚ್ಚಿರುತ್ತದೆ. ಅದನ್ನು ಸಹ ಒಮ್ಮೆ ಪರೀಕ್ಷಿಸಿ.
ಈ ಕಿಟ್ ನೀಡುವುದರಿಂದ ಜನರಿಗೆ ಹೆಚ್ಚಿನ ಲಾಭ ಆಗಬಹುದು. ಸರ್ಕಾರದ ಈ ನಿರ್ಧಾರದಿಂದ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಮಾರುಕಟ್ಟೆಯ ಬೆಲೆ ಏರಿಕೆಯಿಂದ ಮುಕ್ತಿ ಸಿಗಲಿದೆ. ಹಣದ ರೂಪದಲ್ಲಿ ಸಿಗುತ್ತಿದ್ದ ಅಲ್ಪ ಮೊತ್ತಕ್ಕಿಂತ, ಸಬ್ಸಿಡಿ ದರದಲ್ಲಿ ಅಥವಾ ಉಚಿತವಾಗಿ ಸಿಗುವ ಆಹಾರ ಕಿಟ್ ಹೆಚ್ಚು ಪ್ರಯೋಜನಕಾರಿ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಇದನ್ನ ಓದಿ: Bigg Boss Kannada 12 Finale Voting Result, Finale Voting Result Update, Bigg Boss Kannada, BBK12
ಅನ್ನಭಾಗ್ಯ ಯೋಜನೆಯ ಬಾಕಿ ಇರುವ ಕಂತುಗಳನ್ನು ಶೀಘ್ರದಲ್ಲೇ ಜಮಾ ಮಾಡಲಾಗುವುದು ಹಾಗೂ ಇನ್ನು ಕೆಲವೇ ದಿನಗಳಲ್ಲಿ ಉಚಿತ ಆಹಾರ ಕಿಟ್ ಅನ್ನು ನೀಡಲಾಗುತ್ತದೆ ಎಂದು ಆಹಾರ ಇಲಾಖೆಯ ಸಚಿವ ಕೆ.ಎಚ್. ಮುನಿಯಪ್ಪ ಅವರು ಸ್ಪಷ್ಟಪಡಿಸಿದ್ದಾರೆ. ವಿಧಾನಸಭೆಯಲ್ಲಿ ಶಾಸಕ ಮಹೇಶ್ ತೆಂಗಿನಕಾಯಿ ಅವರು ಈ ಬಗ್ಗೆ ಪ್ರಶ್ನೆ ಎತ್ತಿದಾಗ ಸಚಿವರು ಈ ಮಾಹಿತಿ ನೀಡಿದ್ದಾರೆ. ಹಸಿವು ಮುಕ್ತ ರಾಜ್ಯದ ಗುರಿಯನ್ನು ಈ ಯೋಜನೆಯ ಮೂಲಕ ಸಾಧಿಸಲು ಸರ್ಕಾರ ಬದ್ಧವಾಗಿದೆ ಎಂದು ಅವರು ಹೇಳಿದ್ದಾರೆ.
ಅನ್ನಭಾಗ್ಯ ಹಾಗೂ ಗೃಹಲಕ್ಷೀ ಈ ಎರಡೂ ಯೋಜನೆಗಳು ರಾಜ್ಯದ ಜನರಿಗೆ ದೊಡ್ಡ ಆರ್ಥಿಕ ಬೆಂಬಲವಾಗಿವೆ. ಗೃಹಲಕ್ಷ್ಮಿ ಯೋಜನೆಯು ಮಹಿಳೆಯರನ್ನು ಆರ್ಥಿಕವಾಗಿ ಸಬಲಗೊಳಿಸುತ್ತಿದ್ದರೆ, ಅನ್ನಭಾಗ್ಯ ಯೋಜನೆಯು ಹಸಿವು ನಿವಾರಣೆಗೆ ಸಹಾಯ ಮಾಡುತ್ತಿದೆ. ಈಗಾಗಲೇ ಹಲವು ಜಿಲ್ಲೆಗಳಲ್ಲಿ ಹಣ ಬಿಡುಗಡೆ ಆರಂಭವಾಗಿದ್ದು, ಉಳಿದ ಫಲಾನುಭವಿಗಳಿಗೆ ಶೀಘ್ರದಲ್ಲೇ ತಲುಪಿಸಲಾಗುವುದು ಎಂದು ಸರ್ಕಾರ ಭರವಸೆ ನೀಡಿದೆ. ಅರ್ಹರು ತಮ್ಮ ಖಾತೆಯ ಸ್ಥಿತಿಯನ್ನು ಪರಿಶೀಲಿಸಿ ಮತ್ತು ಅಗತ್ಯ ಕ್ರಮಗಳನ್ನು ತೆಗೆದುಕೊಂಡು ನೆರವು ಪಡೆಯಿರಿ.
ಇನ್ನು ನಿಮ್ಮ ಪ್ರಕಾರ ಅನ್ನಭಾಗ್ಯ ಯೋಜನೆ ಯಲ್ಲಿ ಮಾಡಿರುವ ಬದಲಾವಣೆ ಬಗ್ಗೆ ನಿಮ್ಮ ಅನಿಸಿಕೆ ಕಾಮೆಂಟ್ ಮಾಡಿ.
ಅನ್ನಭಾಗ್ಯ ಯೋಜನೆ ಜೊತೆಗೆ ಇಂದಿರಾ ಕಿಟ್, Government New Scheme, Indira Kit For Free, Indira Kit along with Annabhagya Yojana, Annabagya Scheme Update
